ರೋಹಿತ್ ಕುಮಾರ್ ಪೌಡೆಲ್ (ಜನನ ೨ ಸೆಪ್ಟೆಂಬರ್ ೨೦೦೨) ನೇಪಾಳದ ಕ್ರಿಕೆಟಿಗ ಮತ್ತು ನೇಪಾಳ ರಾಷ್ಟ್ರೀಯ ಕ್ರಿಕೆಟ್ ತಂಡದ ಪ್ರಸ್ತುತ ನಾಯಕ. ಅವರು ೮ ಫೆಬ್ರವರಿ ೨೦೧೮ ರಂದು ೨೦೧೮ ಐಸಿಸಿ ವರ್ಲ್ಡ್ ಕ್ರಿಕೆಟ್ ಲೀಗ್ ಡಿವಿಷನ್ ಪಂದ್ಯಾವಳಿಯಲ್ಲಿ ನೇಪಾಳಕ್ಕಾಗಿ ತನ್ನ ಚೊಚ್ಚಲ ಲಿಸ್ಟ್ ಏ ಆಟವನ್ನು ಆಡಿದರು. ಬಾಂಗ್ಲಾದೇಶದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ನೇಪಾಳ ಆಡಿದ ನಂತರ ಅವರು ಕ್ರಿಕೆಟ್ ಆಡಲು ಸ್ಫೂರ್ತಿ ಪಡೆದರು. ಜನವರಿ ೨೦೧೯ ರಲ್ಲಿ, ಕುಮಾರ್ ಅಂತರಾಷ್ಟ್ರೀಯ ಅರ್ಧಶತಕವನ್ನು ಗಳಿಸಿದ ಅತ್ಯಂತ ಕಿರಿಯ ಪುರುಷ ಕ್ರಿಕೆಟಿಗರಾದರು. ಅವರು ಅಂತಾರಾಷ್ಟ್ರೀಯ ಏಕದಿನ ಸ್ವರೂಪದಲ್ಲಿ ನೇಪಾಳಕ್ಕಾಗಿ ಸಾರ್ವಕಾಲಿಕ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಮತ್ತು ಕ್ರಿಕೆಟ್‌ನಲ್ಲಿ ೧,೦೦೦ ರನ್ ಗಳಿಸಿದ ಮೊದಲ ನೇಪಾಳದ ಆಟಗಾರ. ಅವರು ನವೆಂಬರ್ ೨೦೨೨ ರಲ್ಲಿ ನೇಪಾಳ ಕ್ರಿಕೆಟ್ ತಂಡದ ನಾಯಕರಾಗಿ ನೇಮಕಗೊಂಡರು. == ಉಲ್ಲೇಖಗಳು ==